ಶುಕ್ರವಾರ, ಆಗಸ್ಟ್ 19, 2011

ರಾಷ್ಟ್ರೀಯ ಉದ್ಯಾನ ಸಂರಕ್ಷಣೆಗೆ ಕ್ರಮ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ನಾಗರಹೊಳೆ ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನ ಸುತ್ತಮುತ್ತಲಿನ ೧೦ ಕಿ.ಮೀ. ವ್ಯಾಪ್ತಿಯಲ್ಲಿರುವ ಗ್ರಾಮ ಗಳನ್ನು `ಸೂಕ್ಷ್ಮ ಪರಿಸರ ವಲಯ' (ಇಕೋ ಸೆನ್ಸಿಟಿವ್ ಝೋನ್) ಎಂದು ಘೋಷಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಸೂಚನೆಯನ್ವಯ ಸೂಕ್ಷ್ಮ ಪರಿಸರ ವಲಯದಲ್ಲಿ ಮೈಸೂರು ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯ ೮೯ ಗ್ರಾಮಗಳು ಬರಲಿವೆ. ಈ ವಿಷಯ ಸದ್ಯ ಕರಡು ಹಂತ ದಲ್ಲಿದ್ದು, ಅಂತಿಮ ಪ್ರಸ್ತಾವನೆ ಸಿದ್ಧಗೊಳ್ಳಬೇಕಿದೆ.
ಹುಣಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ. ವಿಜಯರಂಜನ್ ಸಿಂಗ್ ನೇತೃತ್ವದಲ್ಲಿ ಆಗಸ್ಟ್ ೧೧ ರಂದು ಹುಣಸೂರು ಕಚೇರಿಯಲ್ಲಿ ನಡೆದ ಪ್ರಥಮ ಸಭೆಯಲ್ಲಿ ಪ್ರಸ್ತಾವನೆ ಸಿದ್ಧ ಪಡಿಸುವ ಕುರಿತು ಸಮಾಲೋಚನೆ ನಡೆದಿದೆ. ಸಮಿತಿ ಸದಸ್ಯರಿಗೆ ಡಿಸಿಎಫ್ ಕರಡು ಪ್ರಸ್ತಾವನೆ ನೀಡಿದ್ದಾರೆ. ಸಮಿತಿ ಸಿದ್ಧಪಡಿಸುವ ಪ್ರಸ್ತಾವನೆಯನ್ನು ರಾಜ್ಯ ಸರಕಾರದ ಮೂಲಕ ಕೇಂದ್ರ ಸರ ಕಾರಕ್ಕೆ ಕಳುಹಿಸಬೇಕಾಗಿದೆ.