ಕಾಂಗೀರ ಕೆ. ಬೋಪಣ್ಣ ವೀರಾಜಪೇಟೆ
ವೀರರಾಜೇಂದ್ರ ರಾಜನ ಕಾಲದಲ್ಲಿ ನಿರ್ಮಾಣ ವಾದ ಅಂದಿನ ವೀರರಾಜೇಂದ್ರಪೇಟೆ ಇಂದು ವೀರಾಜಪೇಟೆಯಾಗಿ ಬೆಳೆದಿದೆ. ಆದರೆ ರಾಜರ ಕಾಲದ ಕುರುಹುಗಳು ವಿರಳ. ಇರುವ ಎರಡು ಸ್ಮಾರಕಗಳನ್ನು ಸಂರಕ್ಷಿಸಲು ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ.
ಗಡಿಯಾರ ಕಂಬದ ಕಡೆಯಿಂದ ಪ್ರವಾಸಿ ಮಂದಿರದ ಕಡೆಗೆ ತೆರಳಲು ಬಳಕೆಯಾಗು ತ್ತಿದ್ದ ಗುಮ್ಮಟ ಮೆಟ್ಟಿಲುಗಳು ರಾಜರ ಸ್ಮಾರಕ. ಆದರೆ ಇದು ವಿಕ್ಟೋರಿಯ ಕ್ಲಬ್‌ನ ಜಾಗದಲ್ಲಿದೆ. ಪ್ರಸ್ತುತ ಪ್ರವಾಸಿ ಮಂದಿರದ ಕಡೆಗೆ ತೆರಳುವ ಹಳೆಯ ಮಾರ್ಗ ಬಂದ್ ಆಗಿದೆ. ಇದು ಖಾಸಗಿ ಜಾಗದಲ್ಲಿದ್ದರೂ ಅದನ್ನು ಸಂರಕ್ಷಿಸಲು ಪಟ್ಟಣ ಪಂಚಾಯಿತಿ ಕಾಳಜಿ ವಹಿಸಬೇಕಾಗಿತ್ತು. ಆದರೆ ಅಂಥ ಇಚ್ಛಾಶಕ್ತಿ ಪಂಚಾಯಿತಿಗೆ ಇದ್ದಂತಿಲ್ಲ.
ಮಂಗಳವಾರ, ಜುಲೈ 19, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ